ಭಟಲ ಪಿನಾರಿ ಸ್ಟರ್‌ಕ್ಯೂಲಿಯೇಸೀ ಕುಟುಂಬಕ್ಕೆ ಸೇರಿದ ಅಲಂಕಾರ ವೃಕ್ಷ. ಸ್ವರ್‌ಕ್ಯೂಲಿಯ ಫೀಟಿಡ ಇದರ ಸಸ್ಯವೈಜ್ಞಾನಿಕ ಹೆಸರು. ಉಷ್ಣವಲಯದ ಮೂಲನಿವಾಸಿಯಾದ ಇದು ಆಫ್ರಿಕ, ಉತ್ತರ ಆಸ್ಟ್ರೇಲಿಯ, ಶ್ರೀಲಂಕಾ, ಮಲಕಾ ದ್ವೀಪಗಳು ಹಾಗೂ ಭಾರತದಲ್ಲಿ ಸಮೃದ್ಧವಾಗಿ ಹರಡಿದೆ. == ವಿವರ == ಇದು ೭-೧೫ ಮೀ ಎತ್ತರಕ್ಕೆ ಬೆಳೆಯುವ ಮರ. ಎಲೆಗಳು ಸಂಯುಕ್ತ ಮಾದರಿಯವು. ಫೆಬ್ರುವರಿ-ಮಾರ್ಚ್ ಹೂಬಿಡುವ ಕಾಲ. ಆಗ ಹೂಗಳಿಂದ ದುರ್ವಾಸನೆ ಹೊರಡುತ್ತದೆ. ಕಾಯಿ ದೋಣಿಯಾಕಾರದ್ದು. ಭಟಲ ಪಿನಾರಿಯ ವೃದ್ಧಿ ಬೀಜದ ಮೂಲಕ. == ಉಪಯೋಗಗಳು == ಕ್ಷಾಮಕಾಲದಲ್ಲಿ ಇದರ ಬೀಜಗಳನ್ನು ಹುರಿದು ತಿನ್ನುವುದಿದೆ. ಬೀಜದಿಂದ ಎಣ್ಣೆಯೂ ಒದಗುತ್ತದೆ. ತೊಗಟೆಯಿಂದ ನಾರನ್ನು ತೆಗೆದು ಹಗ್ಗಗಳನ್ನು ಹೊಸೆಯುವುದುಂಟು. ಚೌಬೀನೆಯಿಂದ ಹಗುರವಾದ ಉಪಕರಣಗಳನ್ನು ತಯಾರಿಸಬಹುದು. == ಛಾಯಾಂಕಣ == == ಉಲ್ಲೇಖಗಳು ==